ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಲ ಗುಣಸದ್ಧಾಮ ಮಧ್ವನಾಮಾ
ಆವ ಕಚ್ಛಪರೂಪದಿಂದಲ್ಯನ್ಡೋದಕದಿ
ಓವಿ ಧರಿಸಿಹ ಸೇಶಮೂರುತಿಯನು
ಆವನ ಬಳಿಪಿಡಿದು ಹರಿಯ ಸುರರೈದುವರು
ಆ ವಾಯು ನಮ್ಮ ಕುಲಗುರುರಾಯನು
ಆವಾತನು ದೇಹದಿರೆ ಹರಿಯು ತಾ ನೆಲೆಸಿರುವ
ಆವಾತನು ತೊಲಗಿ ಹರಿ ತಾ ತೊಲಗುವ
ಆವಾತನು ದೇಹದೊಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು
ಕರಣಾಭಿಮಾನಿದಿವಿಜರು ದೇಹವನು ಬಿಡಲು
ಕುರುಡ ಕಿವುಡನು ಮೂಕನೆಂದೆನಿಸುವ
ಪರಮ ಮುಖ್ಯಪ್ರಾಣ ತೊಲಗಲಾದೆಹವನು
ಅರಿತು ಪೆಣನೆಂದು ಪೇಳ್ವರು ಬುಧಜನಾ
ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನೇಮದಿ ನೆಲೆಸಿಹ
ಹರಿಯನಲ್ಲದೇ ಬಗೆಯ ಅನ್ಯರನು ಲೋಕದೊಳು
ಗುರುಕುಲತಿಲಕ ಮುಖ್ಯಪವಮಾನನು
ಶ್ರೀ ಹನುಮಂತದೇವರ ವರ್ಣನೆ
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆoದೆನಿಸಿದ
ಪೋತಭಾವದಿ ತರಣಿ ಬಿಂಬಕ್ಕೆ ಲಂಘಿಸಿದ
ಈತಗೆಣೆ ಯಾರು ಮೂರ್ಲೋಕದೊಳಗೆ
ತರಣಿಗಭಿಮುಖವಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿಂದೆ ಮುಂದಾಗಿ ನಡೆದ
ಪರಮಪವಮಾನಸುತ ಉದಯಾಸ್ತಶೈಲಗಳ
ಭರದಿ ಐದಿದ ಈತಗುಪಮೆಯುoಟೆ
ಅಖಿಲ ವೇದಗಳ ಸಾರುವ ಮುನ್ನತಾ
ನಿಖಿಳ ವ್ಯಾಕರಣ ಶಾಸ್ತ್ರವನು ಪೇಳೆ
ಮುಖದಲ್ಲಿ ಕಿoಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ
ತರಣಿಸುತನನು ಕಾಯ್ದು ಶರಧಿಯನು ನೆರೆ ದಾಟಿ
ಧರಣಿಸುತೆಯಳ ಕಂಡು ದನುಜರೊಡನೆ
ಭರದಿ ರಣವನು ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯಿo ಬಂದ ಹನುಮಂತನು
ಹರಿಗೆ ಚೂದಾರತ್ನವನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಹು ರಕ್ಕಸರನು
ಒರಸಿ ರಣದಲ್ಲಿ ದಶಶಿರನ ಹುಡಿಗಟ್ಟಿ ತಾ
ಮೆರೆದ ಹನುಮಂತ ಬಲವಂತ ಧೀರಾ
ಉರಗಬoಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿಕುಲತಿಲಕನಾಜ್ಞೆಯ ತಾಳಿ ತಾ
ಗಿರಿಸಹಿತ ಸಂಜೀವನವ ಕಿತ್ತಿ ತಂದಿತ್ತ
ಸುರನರರೋಳು ಸರಿಯುಂಟೆ ಹನುಮಂತನಿಗೆ
ವಿಜಯ ರಘುಪತಿಯೊಲಿಸಿ ಧರಣಿಸುತೆಯಳನೀತ
ಭಜಿಸಿ ಮೌಕ್ತಿಕದ ಹಾರವನ್ನು ಪಡೆದ
ಅಜಪದವಿ ರಾಮ ಕೊಡ ಬರಲು ಹನುಮಂತ
ನಿಜ ಭಕುತಿಯನೆ ಬೇಡಿ ವರವ ಪಡೆದ
ಶ್ರೀ ಭೀಮಸೇನದೇವರ ವರ್ಣನೆ
ಆ ಮಾರುತನೆ ಭೀಮನೆನಿಸಿ ದ್ವಾಪರಯುಗದಿ
ಸೋಮ ಕುಲದಲಿ ಜನಿಸೆ ಪಾರ್ಥರೊಡನೆ
ಭೀಮ ವಿಕ್ರಮ ರಕ್ಕಸರನು ಮುರಿದಿಕ್ಕಿದ
ಆ ಮಹಿಮ ನಮ್ಮ ಕುಲಗುರುರಾಯನು
ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರಿಯೋಡೆದು ಶತಶ್ರುನ್ಗವೆಂದೆನಿಸಿತು
ಹರಿಗಳನು ಹರಿಗಳಿಂ ಕರಿಗಳನು ಕರಿಗಳಿಂ
ಅರೆದ ವೀರನಿಗೆ ಸುರನರರು ಸರಿಯೇ
ಕುರುಪ ಗರಳವನಿಕ್ಕೆ ನೆರೆಯುಂಡು ತೇಗುತಲಿ
ಉರಗಗಳ ಮೇಲ್ಪಿಡಳು ಅವನೋರಸಿದ
ಅರಗಿನ ಮನೆಯಲಿ ಉರಿಯನಿಕ್ಕಿ ತಾ ಧೀರ
ಜಾಹ್ನವಿಗೊಯ್ದ ತನ್ನನುಜರ
ಅಲ್ಲಿದ್ದ ಬಕಹಿಡಿoಬಕರೆಂಬ ರಕ್ಕಸರ
ನಿಲ್ಲದೊರೆಸಿದ ಲೋಕಕಂಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕರವಿಡಿದು
ಎಲ್ಲ ಸುಜನರಿಗೆ ಹರುಷವ ಬೀರಿದ
ರಾಜಕುಲವಜ್ರವನೆನಿಸಿದ ಮಾಗಧನ ಸೀಳಿ
ರಾಜಸೂಯಯಾಗವನು ಮಾಡಿಸಿದನು
ಆಜಿಯಲಿ ಕೌರವರ ಬಲವಾ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ
ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ದಾನವರ ಸವರಬೇಕೆಂದು ಬೇಗ
ಕಾನನವ ಪೊಕ್ಕು ಕಿರ್ಮೀರಾದಿಗಳ ತರಿದು
ಮಾನಿನಿಗೆ ಸುಗಂಧಿಕವನಿತ್ತ
ದುರುಳ ಕೀಚಕನು ದ್ರುಪದೀದೇವಿ ಚೆಲ್ವಿಕೆಗೆ
ಮರುಳಾಗಿ ಕರೆಕರೆಯ ಮಾಡಲವನ
ಗರಡಿಮನೆಯೋಳು ಬರಸಿ ಒರೆಸಿ ಅವನನುಜರ
ಕುರುಪನಟ್ಟಿದ ಮಲ್ಲಕುಲವ ಸದೆದ
ವೈರಿ ದುಶ್ಶಾಸನನ ತೊಡೆಯ ಮೆಳಡ್ಡಗೆಡಹಿ
ವೀರನರಹರಿಯ ಲೀಲೆಯ ತೋರಿದ
ಕೌರವರ ಬಲ ಸವರಿ ವೈರಿಗಳ ನೆಗ್ಗುತ್ತ
ಓರoತೆ ಕುರವರನ್ನೆಲ್ಲ ತರೆದ
ಗುರುಸುತನು ಸಂಗರದಿ ನಾರಾಯಣಾಸ್ತ್ರ ಬಿಡೆ
ಉರವನಿಸಿ ಬರಲು ಶಸ್ತ್ರವ ಬಿಸುಡದೆ
ಹರಿಯ ಕೃಪಾಪಡೆದಿದ್ದ ಭೇಮಹುಂಕಾರ ಗೈದು
ಎರಗದಲೆ ದಿವ್ಯಾಸ್ತ್ರ ನೆರೆ ಅಟ್ಟಿದ
ನಾರಿರೋದನ ಕೇಳಿ ಮನಮರುಗಿ ಗುರುಸುತನ
ಹಾರ್ಹಿಡಿದು ಶಿರೋರತ್ನ ಕಿತ್ತಿ ತೆಗೆದ
ನೀರೋಳಡಗಿದ್ದು ದುರ್ಯೋಧನನ ಹೊರಗೆಡಹಿ
ಉರುದ್ವಯವ ತನ್ನ ಗದೆಯಿಂದ ಮುರಿದ
ಚಂಡವಿಕ್ರಮನ ಗದೆಗೊಂಡು ರಣದೊಳಗೆ ಭೂ
ಮoಡಲದೊಳುದ್ಭವಿಸಿದಖಿಲ ಖಳರ
ಹಿಂಡಿ ಬಿಸುಟಿದ ವೃಕೋದರನ ಪ್ರತಾಪವನು
ಕಂಡು ನಿಲ್ಲುವರಾರು ತ್ರಿಭುವನದೊಳು
ಶ್ರೀ ಮಧ್ವಾಚಾರ್ಯರ ವರ್ಣನೆ
ದಾನವರು ಕಲಿಯುಗದೊಳವತರಿಸಿ ಸುಜನರಿಗೆ
ವೇನನ ಕುಮತವ ಬೋಧಿಪುದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ
ಅರ್ಭಕತನವ ನೀಗಿ ಬದರಯಲಿ ಮಧ್ವಮುನಿ
ನಿರ್ಭಯದಿ ಸಕಲಶಾಸ್ತ್ರಾರ್ಥ ಪಠಿಸಿ
ಉರ್ವಿಯೊಳು ಆಮ್ನಾಯದ ತತ್ತ್ವಮಾರ್ಗವನು
ಸರ್ವ ಸುಜನರಿಗೆ ಅರುಹಿದ ಮೋದದಿ
ಸರ್ವೇಶ ಹರಿ ವಿಶ್ವವೆಲ್ಲವೂ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವಸತ್ಯವೆಂದರುಹಿದ
ಸರ್ವಾದಿಗೀರ್ವಾಣ ಸಂತತಿಯಲಿ
ಏಕವಿಂಶತಿ ಕುಭಾಷ್ಯಗಳ ಬೇರನು ತರಿದು
ಶ್ರೀಕರಾರ್ಚಿತ ನೋಲುಮೆ ಶಾಸ್ತ್ರ ರಚಿಸಿ
ಲೋಕತ್ರಯದೊಳಿದ್ದ ಸುರರು ಆಲಿಸುವಂತೆ
ಆ ಕಮಲನಾಭಯತಿನಿಕರಕೊರೆದ
ಬದರಿಕಾಶ್ರಮಕ್ಕೆ ಪುನರಪಿ ಪೋಗಿ ವ್ಯಾಸಮುನಿ
ಪದಕೆರಗಿ ಸಕಲ ವೆದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ವೈದಿದ ಮಧ್ವಮುನಿರಾಯಗಭಿನಮಿಪೆನು
ಜಯ ಜಯತು ದುರ್ವಾದಿಮತತಿಮಿರಮಾರ್ತಾಂಡ
ಜಯ ಜಯತು ವಾದಿಗಜಪಂಚಾನನ
ಜಯ ಜಯತು ಚಾರ್ವಾಕಗರ್ವಪರ್ವತಕುಲಿಶ
ಜಯ ಜಯತು ಜಗನ್ನಾಥ ಮಧ್ವನಾಥಾ
ತುಂಗಕುಲಗುರುವರನ ಹ್ರುತ್ಕಮಳದೊಳು ನೆಲೆಸೆ
ಭಂಗವಿರದ ಸುಖವ ಸುಜನಕೆಲ್ಲ
ಹಿಂಗದೆ ಕೊಡುವ ಗುರಮಧ್ವಾoತರ್ಯಾಮಿ
ಶ್ರೀ ರಂಗವಿಠಲನೆಂದು ನೆರೆನಂಬಿರೋ
ಸೋಮಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀ ಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು
ಈ ಮಧ್ವನಾಮ ಬರೆದೊದಿದವರಿಗೆ
ಪುತ್ರದಿಲ್ಲದವರು ಸತ್ಪುತ್ರರೈದುವರು ಸ
ರ್ವತ್ರದಲಿ ದಿಗ್ವಿಜಯವಾಹುದು ಸದಾ
ಶತ್ರುಗಳು ಬೀಳ್ವರಪಮೃತ್ಯು ಬರಲಂಜುವದು
ಸೂತ್ರನಾಮಕನ ಸಂಸ್ಮ್ರುತಿಮಾತ್ರದಿ
ಶ್ರೀಪಾದರಾಜರುಸುರಿದ ಮಧ್ವನಾಮ ಸಂ
ತಾಪವನು ಕಳೆದು ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವಾ
ಕೂಪಾರದಿಂದ ಕಡೆಹಾಯಿಸುವುದು
||जय हनुमान ||
No comments:
Post a Comment
Note: only a member of this blog may post a comment.